ಮೈಟ್ನರ್, ಲೀಸ್
1878-1968. ಆಸ್ಟ್ರಿಯನ್ - ಸ್ವೀಡಿಷ್ ಮಹಿಳಾ ಭೌತವಿe್ಞÁನಿ.  ಜನನ ವಿಯೆನ್ನದಲ್ಲಿ 7-11-1878.  ಮೇರಿ ಕ್ಯೂರಿಯ (1867-1934) ಉಜ್ವಲ ಆದರ್ಶ ಈಕೆಯ ಭವಿಷ್ಯವನ್ನು ರೂಪಿಸಿತು.  1906 ರಲ್ಲಿ ವಿಯೆನ್ನ ವಿಶ್ವವಿದ್ಯಾಲಯದ ಪಿ.ಎಚ್.ಡಿ. ಪದವಿಗಳಿಸಿ ಆ ವೇಳೆಗೆ ಶಕಲ ಸಿದ್ಧಾಂತದ ಜನಕರೆಂದು ಪ್ರಸಿದ್ಧರಾದ ಮ್ಯಾಕ್ಸ್ ಪ್ಲ್ಯಾಂಕ್ (1858-1947) ನೇತೃತ್ವದಲ್ಲಿ ತನ್ನ ಅಧ್ಯಯನ ಮುಂದುವರಿಸಲು ಬರ್ಲಿನ್ನಿಗೆ ತೆರಳಿದಳು.  ಪ್ಲ್ಯಾಂಕರ ದಿಗ್ಧರ್ಶನದಲ್ಲಿ ಈಕೆ ಅತಿ ವೇಗದಿಂದ ಮುಂದುವರಿದಳು.  ಆಟೋಹಾನ್ (1879-1968) ಎಂಬ ಸಹಾಧ್ಯಾಯಿ ಜೊತೆ ಹಲವು ಪರಮಾಣುಗಳ ವಿಕರಣಪಟುತ್ವ ಕುರಿತು ಪ್ರಾಯೋಗಿಕ ಪರೀಕ್ಷೆಗಳನ್ನು ಪ್ರಾರಂಭಿಸಿದಳು.  ಇವುಗಳ ಫಲವಾಗಿ ದೊರೆತ ಹೊಸ ವಿಕಿರಣಪಟು ಧಾತುಗಳು ಹಾಗೂ ಇವುಗಳ ವಿಕಿರಣ ಪಟುತ್ವದಿಂದಾಗಿ ಸಂಯುಕ್ತತೆಯನ್ನು ಕಳೆದುಕೊಂಡ ವಸ್ತುಗಳೆಡೆಗೆ ತನ್ನ ಲಕ್ಷ್ಯ ಹೊರಳಿಸಿದಳು.

1930ರಲ್ಲಿ ವಿe್ಞÁನ ಸಂಸ್ಥೆಗಳು ಯುರೇನಿಯಮ್‍ನತ್ತ ತಮ್ಮ ಲಕ್ಷ್ಯಕೇಂದ್ರೀಕರಿಸಿ ಕಾರ್ಯಪ್ರವೃತ್ತವಾದವು. ಈ ಧಾತುವನ್ನು ನ್ಯೂಟ್ರಾನುಗಳ ತಾಡನೆಗೆ ಈಡುಮಾಡಿದಾಗ ನೆಪ್ಚೊನಿಯಮ್ ಎಂಬ ಹೊಸ ಧಾತು ಉತ್ಪನ್ನವಾಗುವುದೆಂದು 1934ರಲ್ಲಿ ಎನ್ರಿಕೋ ಪರ್ಮಿ (1901-54) ಸಾರಿದರು. ಫರ್ಮಿ ಅವರ ಈ ಅಭಿಪ್ರಾಯ ಅನೇಕರಿಗೆ ಒಪ್ಪಿಗೆಯಾಗಲಿಲ್ಲ. ಇಂಥವರ ಪ್ರಕಾರ ಯುರೇನಿಯಮ್ ನ್ಯೂಕ್ಲಿಸ್ ತುಂಡಾಯಿತೇ ಹೊರತು, ಯಾವುದೇ ಹೊಸ ಧಾತು ಉತ್ಪನ್ನವಾಗಲಿಲ್ಲ. ಇಂಥ ಪ್ರಯೋಗ ಹೊಸ ಧಾತುಗಳನ್ನು ಉತ್ಪಾದಿಸದೆ ನಮಗೆ ಈ ಮೊದಲೆ ಪರಿಚಿತವಿದ್ದ ಧಾತುಗಳನ್ನು ಮಾತ್ರ ಉತ್ಪಾದಿಸಬಲ್ಲದು ಎಂಬುದಾಗಿ ಐರಿನ್ ಕ್ಯೂರಿ (91897-1956) ಕೂಡ ಸ್ಪಷ್ಟವಾಗಿ ಹೇಳಿದರು. ಈ ಸಂಬಂಧದಲ್ಲಿ ಐನ್‍ಸ್ಟೈನರ (1879-1955) ಇ =mಛಿ2 ಸಮೀಕರಣ, ಪ್ರತಿಯೊಬ್ಬ ಸಂಶೋಧಕನ ಎದುರಿನಲ್ಲಿಯೂ ಬೃಹತ್ ಪ್ರಶ್ನಾರ್ಥಕ ರೀತಿಯಲ್ಲಿ ಓಲಾಡತೊಡಗಿತು. ಏಕೆಂದರೆ ಪರಮಾಣು ಛೇದನಪರಿಣಾಮ ನಂಬಲು ಅಸಾಧ್ಯವೆನಿಸುವಷ್ಟು ಶಕ್ತಿಯನ್ನು ಬಿಡುಗಡೆ ಮಾಡುವುದೆಂದು ಈ ಸಮೀಕರಣ ತಿಳಿಸುತ್ತದೆ.

ಇದೇ ವೇಳೆಗೆ ಮೈಟ್ನರ್ ಬರ್ಲಿನ್ನಿನಲ್ಲಿ ಇದೇ ಸಮಸ್ಯೆಯನ್ನು ಬಿಡಿಸುವುದರಲ್ಲಿ ಮಗ್ನಳಾಗಿದ್ದಳು.  ಈಗ ಈ ಸಮಸ್ಯೆಗೆ ತುರ್ತು ಪರಿಹಾರ ಶೋಧಿಸುವುದು ಅತ್ಯಗತ್ಯವಾಗಿತ್ತು.  ನಾಟ್ಸೀ ಪ್ರಭುಗಳು ಯಹೂದ್ಯಜೆಯಾದ ಈಕೆಯ ಕಾರ್ಯ ಪ್ರಗತಿಗೆ ಸಂಬಂಧಿಸಿದಂತೆ ವರದಿಗಳನ್ನು ಅಧಿಕಾರಯುತವಾಗಿ ಕೇಳುತ್ತಿದ್ದರು ಮತ್ತು ಈಕೆಗೆ ಹೆಜ್ಜೆ ಹೆಜ್ಜೆಗೂ ಕಿರುಕುಳ ಕೊಡುತ್ತಿದ್ದರು. ಇವೆಲ್ಲದರಿಂದಾಗಿ ಈಕೆಗೆ ತನ್ನ ಜೀವನದ ದಿವಸಗಳು ತುಂಬಿಬಂದವು ಎಂದು ಎನಿಸತೊಡಗಿತು.  ತನ್ನ ಜೀವನದಲ್ಲಿಯೇ ಅತ್ಯಂತ ಮಹತ್ತ್ವದ ಪ್ರಯೋಗದಲ್ಲಿ ನಿರತಳಾದ ಈಕೆಗೆ ಖುದ್ದು ಜೀವವನ್ನೇ ಉಳಿಸಿಕೊಳ್ಳಲು ಜರ್ಮನಿಯಿಂದ ಓಡಿಹೋಗದೆ ವಿಧಿ ಇರಲಿಲ್ಲ.

ಯುರೇನಿಯಮ್ ನ್ಯೂಕ್ಲಿಯಸನ್ನು ಅಲ್ಪವೇಗ ನ್ಯೂಟ್ರಾನುಗಳಿಂದ ಉದ್ರೇಕಿಸಿದಾಗ ಬೇರಿಯಮ್ ಧಾತು ಕಂಡುಬಂತು. ತನ್ನ ಸಹೋದ್ಯೊಗಿಗಳಾದ ಹಾನ್ ಮತ್ತು ಸ್ಟ್ರಾಸ್‍ಮನ್ ಸಹಕಾರದಿಂದ ಮೈಟ್ನರ್ ತಯಾರಿಸಿದ ಪರಮಾಣು ಸೂಕ್ಷ್ಮದರ್ಶಕ ಇದನ್ನು ಸ್ಥಿರೀಕರಿಸಿದಾಗ ಸಂಶೋಧನೆಗೆ ಹೆಚ್ಚಿನ ಚಾಲನೆ ಒದಗಿದಂತಾಯಿತು. ಇದರ ಪರಿಣಾಮ ಗಮನಿಸುವಷ್ಟರಲ್ಲಿಯೇ ಮೈಟ್ನರ್‍ನಾಟ್ಸಿಗಳ ಹಿಡಿತದಿಂದ ಪಾರಾಗಲು ಸ್ಟಾಕ್‍ಹೋಮ್‍ಗೆ ಪಲಾಯನಮಾಡಿ ಕೂಪನ್‍ಹೇಗನ್ನಿನಲ್ಲಿ ನೀಲ್ಸ್ ಬೋರ್ (1885-1962) ಜೊತೆ ಸಂಶೋಧನಮಗ್ನನಾಗಿದ್ದ ತನ್ನ ಸೋದರಳಿಯ ಆಟೋ ಫ್ರಿಶ್‍ನಲ್ಲಿ ಆಶ್ರಯ ಪಡೆದಳು.
ಹಾನ್ ಹಾಗೂ ಸ್ಟ್ರಾಸ್‍ಮನ್‍ರ ಪ್ರಯೋಗಗಳ ಫಲಿತಾಂಶಗಳು ಈಕೆಗೆ ತಿಳಿಸಲ್ಪಟ್ಟವು. 238 ಪರಮಾಣು ತೂಕದ ಯುರೇನಿಯಮ್, 140 ಹಾಗೂ 90 ಪರಮಾಣು ತೂಕಗಳನ್ನು ಹೊಂದಿದ್ದ ಎರಡು ಪ್ರಮುಖ ಸಮಸ್ಥಾನಿಗಳಾಗಿ ಮಾರ್ಪಟ್ಟಿರುವುದು ಕಂಡುಬಂದಿತು. ಅಂದರೆ ಕೊನೆಗೂ ಪರಮಾಣು ವಿದಳನೆ ಮಾನವನಿಗೆ ಸಿದ್ಧಿಸಿತು. ಮೈಟ್ನರ್ ಈ ಪ್ರಯೋಗವನ್ನು ಪುನಃ ಮಾಡಿ ತಪಾಸಿಸುವುದಾಗಿ ನಿರ್ಧರಿಸಿದಳು. ಹೀಗೆ ಈಕೆ ಒಂದು ರೀತಿಯಲ್ಲಿ ಇತಿಹಾಸವನ್ನೇ ನಿರ್ಮಿಸಿದಳು. ಯುರೇನಿಯಮ್ ಪರಮಾಣುವಿನ ವಿದಳನ ಬೇರಿಯಮ್ ಮತ್ತು ಕ್ರಿಪ್ಟಾನ್ ಎಂಬ ಎರಡು ನ್ಯೂಕ್ಲಿಯಸುಗಳನ್ನು ಕೊಟ್ಟುದರ ಜೊತೆಗೆ 200 ಸಾವಿರ ಎಲೆಕ್ಟ್ರಾನ್ ವೋಲ್ಟ್ ಪ್ರಚಂಡಶಕ್ತಿಯನ್ನು ಕೂಡ ಬಿಡುಗಡೆ ಮಾಡಿತು. ಎಂದರೆ ಇಲ್ಲಿಯ ಒಟ್ಟು ರಾಶಿಯ ಹಲವು ಭಾಗ ಐನ್¸್ಟÉೈನ್ 1905ರಲ್ಲಿ ಮುನ್ಸೂಚಿಸಿದ್ದಂತೆಯೇ ಶಕ್ತಿಯಾಗಿ ರೂಪಾಂತರಹೊಂದಿತ್ತು.

ಈ ಪ್ರಯೋಗದಲ್ಲಿ ನ್ಯೂಟ್ರಾನುಗಳ ಪ್ರವಾಹದಿಂದ ಉಂಟಾದ ಬದಲಾವಣೆಯನ್ನು ಈಕೆ ವಿದಳನ (ಫಿಷನ್) ಎಂದು ಹೆಸರಿಸಿದ್ದಳು. ರಾಷ್ಟ್ರಗಳು ಜೀವನ ಮರಣಗಳ ಹೋರಾಟದಲ್ಲಿ ತೊಡಗಿದ್ದ ಅಂದಿನ ವೇಳೆಯಲ್ಲಿ (1939-40) ಈ ಸಂಶೋಧನೆಯು ಸೈನಿಕಮಹತ್ತ್ವ ಸ್ಪುಟವಾಗಿ ಗೋಚರಿಸುವಂತಿತ್ತು. ಇದೇ ವೇಳೆಗೆ ನೀಲ್ಸ್ ಬೋರ್ ಅಮೆರಿಕಕ್ಕೆ ತೆರಳಿದವರು ಅಲ್ಲಿ ಪರಿಸ್ಥಿತಿಯನ್ನು ಐನ್‍ಸ್ಟೈನ್ ಮತ್ತು ಫರ್ಮಿ ಅವರೊಂದಿಗೆ ಚರ್ಚಿಸಿದರು. 1945ರ ಪರಮಾಣು ಬಾಂಬ್ ಪ್ರಯೋಗದ ವರೆಗಿನ ಮುಂದಿನ ಹಂತಗಳೆಲ್ಲವೂ ಈಗ ಸರ್ವವಿಧಿತವಾಗಿವೆ.

ಇತಿಹಾಸದ ಅನಿವಾರ್ಯ ಗತಿಯಲ್ಲಿ ಪರಮಾಣು ಶಕ್ತಿ ಬಸಿತ ಕುರಿತಂತೆ ಮೊದಲ ಸಂಶೋಧನೆಗಳಲ್ಲಿ ಮೈಟ್ನರ್ ವಹಿಸಿದ ಪಾತ್ರ ಗಣನೀಯವಾದದ್ದು.  ವಿದಳನ ಪ್ರಯೋಗಿಕ ಸಾಧ್ಯತೆಯನ್ನು ಗಣಿತಸೂತ್ರವನ್ನೂ ಮೊದಲಿಗೆ ಕಂಡುಕೊಂಡ ಕೆಲವೇ ಮಂದಿ ಮಹಾವಿe್ಞÁನಿಗಳ ಪೈಕಿ ಈಕೆ ಒಬ್ಬಳು.  ಆದರೆ ತರುವಾಯದ ಯುದ್ಧಪ್ರಯೋಗ ವಿಚಾರಗಳಲ್ಲಿ ಈಕೆಯ ಪಾತ್ರ ಏನೂ ಇಲ್ಲ : ವಿe್ಞÁನಿ ಆವಿಷ್ಕರಿಸುತ್ತಾನೆ, ರಾಜಕಾರಣಿ ಪ್ರಯೋಗಿಸುತ್ತಾನೆ ಎನ್ನುವ ಸೂತ್ರದಂತೆ.
(ಕೆ.ಎಸ್.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ